Saturday, July 27, 2013

ತುಂಬಿದ ಕೊಡ

ಯಾವುದೇ ಒಂದು ನಗರವನ್ನು ಅದರ ಕೋಟೆ, ಕಟ್ಟಡ, ಸ್ಮಾರಕಗಳಿಂದ ಅಳೆಯದೆ, ಅಲ್ಲಿನ ಜನ, ನಾಡು-ನುಡಿ, ಅಲ್ಲಿನ ಸಂಸ್ಕೃತಿಗಳಿಂದ ಅಳೆಯಬೇಕೆಂದು ಹಿಂದಿನಿಂದ ನಾವು ಕೇಳ್ಪಟ್ಟಿದ್ದೇವೆ. ನಮ್ಮ ನಾಡಿನ ವಿಷಯದಲ್ಲೂ ಈ ವಿಷಯ ಅಕ್ಷರಶಃ ಸತ್ಯ. ನಮ್ಮ ನಾಡು, ಸರ್ ಎಂ ವಿಶ್ವೇಶ್ವರಯ್ಯನವರ ಭವ್ಯ ಸಂಸ್ಕಾರದ, ಅಗಾಧ ಅನುಭವದ, ಸೃಜನಶೀಲ ಮನಸ್ಸಿನ ಕನ್ನಡಿ. ಇವರ ಅನೇಕ ಸ್ನೇಹಿತರಲ್ಲಿ, ಪ್ರಖ್ಯಾತ ಲೇಖಕ ಡಿ. ವಿ. ಗುಂಡಪ್ಪ (ಮಂಕುತಿಮ್ಮನ ಕಗ್ಗ ಕರ್ತೃ) ನವರು ಒಬ್ಬರು. ಇಬ್ಬರು ಆಗಾಗ ವಡೆ, ಫಿಲ್ಟರ್ ಕಾಫಿ ಹೀರುತ್ತಾ ಸಂಜೆ ತಮ್ಮ ತಮ್ಮ ಕ್ಷೇತ್ರಗಳ ವಿಷಯವಾಗಿ ಬಹಳ ಚರ್ಚಿಸುತಿದ್ದರು. ಅವರ ಚರ್ಚೆಗಳು ಅನೇಕ ಬಾರಿ ಮೈಸೂರು ರಾಜ್ಯದ (೧೯೨೧ನೆ ಇಸವಿ) ಅಭಿವೃದ್ಧಿಗೆ ಸಂಬಂಧ ಪಟ್ಟಿರುತ್ತಿದ್ದು, ವಿಶ್ವೇಶ್ವರಯ್ಯನವರಿಗೆ ಗುಂಡಪ್ಪನವರ ಸಲಹೆಗಳಿಂದ ಅನೇಕ ಬಾರಿ ಉಪಯೋಗವಾಗುತ್ತಿತ್ತು.

ಡಿ. ವಿ. ಗುಂಡಪ್ಪನವರದ್ದು ಎಲ್ಲ ಕ್ಷೇತ್ರಗಳಲ್ಲೂ ಅಸಾಧಾರಣ ಪ್ರತಿಭೆ. ವಿಶ್ವೇಶ್ವರಯ್ಯನವರು ತಮ್ಮ ಕೆಲಸದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದರ ಪರಿಹಾರವನ್ನು ಗುಂಡಪ್ಪನವರ ಸಲಹೆ ಸೂಚನೆಗಳಲ್ಲಿ ಕಂಡುಕೊಳ್ಳುತ್ತಿದ್ದರು. ಅನೇಕ ಬಾರಿ ಇಂಥಹ ಸಹಾಯ ಪಡೆದ ವಿಶ್ವೇಶ್ವರಯ್ಯನವರು, ಕಡು ಬಡತನದಲ್ಲಿ ಬೇಯುತ್ತಿದ್ದ ಗುಂಡಪ್ಪನವರಿಗೆ ಸಹಾಯ ಮಾಡಬೇಕೆಂದು ಬಹಳಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ.



ಹೀಗೆ ಇವರ ಸ್ನೇಹ ಗಟ್ಟಿಗೊಳ್ಳುತ್ತಿರಬೇಕಾದರೆ, ಒಂದು ದಿನ ವಿಶ್ವೇಶ್ವರಯ್ಯನವರು ಸೌತ್ ಇಂಡಿಯಾ ಪೀಪಲ್ಸ್ ಕಾನ್ಫರೆನ್ಸ್ (೧೯೨೯) ಗೆ ಅಧ್ಯಕ್ಷರಾಗಿ ನೇಮಕಗೊಂಡಾಗ, ಗುಂಡಪ್ಪನವರೇ ತಮ್ಮ ಪ್ರಮುಖ ಕಾರ್ಯದರ್ಶಿ ಆಗಬೇಕೆಂದು ಹಠ ಹಿಡಿದರು. ಹಾಗೆ ಮೈಸೂರು ರಾಜ್ಯಕ್ಕೆ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕೆಂದು ಕೋರಿಕೊಂಡಿದ್ದರು. ವಿಶ್ವೇಶ್ವರಯ್ಯನವರ ಇಂಗಿತ ಅರಿತ ಗುಂಡಪ್ಪನವರ ಸ್ವಾಭಿಮಾನ ಇದಕ್ಕೆ ಒಪ್ಪಲಿಲ್ಲ. "ನನ್ನ ವೃತ್ತಿಧರ್ಮ ಬರವಣಿಗೆ ಹಾಗು ಪತ್ರಿಕೋದ್ಯಮ. ಸ್ನೇಹಿತನ ಜೊತೆ ನಡೆಸಿದ ಮಾತುಕಥೆಗಳಿಗೆ ಹಣ ತೆಗೆದುಕೊಳ್ಳಲಾರೆ" ಎಂದು ನಯವಾಗಿ ತಿರಸ್ಕರಿಸಿದರು. ಇದರಿಂದ ನಿರಾಶರಾದ ವಿಶ್ವೇಶ್ವರಯ್ಯ, ಬೇರೆ ದಾರಿ ಕಾಣದೆ ಗುಂಡಪ್ಪನವರಿಗೆ "ನೀವು ಒಪ್ಪದೇ ಹೋದರೆ ನಾನು ಮತ್ತೆಂದಿಗೂ ನಿಮ್ಮೊಡನೆ ರಾಜ್ಯಕ್ಕೆ ಸಂಬಂಧ ಪಟ್ಟ ವಿಚಾರಗಳನ್ನು ಎತ್ತುವುದಿಲ್ಲ ಮತ್ತು ಸಲಹೆ ಸೂಚನೆಗಳನ್ನು ಪಡೆಯುವುದಿಲ್ಲ" ವೆಂದು ತಾಕೀತು ಮಾಡಿದರು.

ರಾಜಕೀಯವೆಂದರೆ ಅಪಾರ ಆಸಕ್ತಿ ಹೊಂದಿದ್ದ ಗುಂಡಪ್ಪನವರು ತಮ್ಮ ಸ್ನೇಹಿತನ ಮಾತಿಗೆ ಅವಾಕ್ಕಾದರು. ವಿಶ್ವೇಶ್ವರಯ್ಯನವರಂತು ಮಾತಿಗೆ ಸಿಕ್ಕಾಗಲೆಲ್ಲಾ, ಬರಿ ವಯಕ್ತಿಕ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದರೆ ವಿನಃ ಬೇರೆ ಮಾತೆ ಆಡುತ್ತಿರಲಿಲ್ಲ. ಗುಂಡಪ್ಪನವರು ರಾಜ್ಯಕ್ಕೆ ಸಂಬಂಧಿಸಿದ ವಿಷಯ ಎತ್ತಿದರೂ, ವಿಶ್ವೇಶ್ವರಯ್ಯನವರು ದಿವ್ಯ ಮೌನ ತಾಳುತ್ತಿದ್ದರು. ಒಂದೆರಡು ದಿನಗಳಲ್ಲೇ ವಿಶ್ವೇಶ್ವರಯ್ಯನವರ ಈ ನಡವಳಿಕೆಯಿಂದ ಗುಂಡಪ್ಪನವರು ಚಡಪಡಿಸಲಾರಂಭಿಸಿದರು. ಕೊನೆಗೆ ಬೇರೆ ದಾರಿ ಕಾಣದೆ ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿಕೊಂಡರು.

ವಿಶ್ವೇಶ್ವರಯ್ಯನವರು ಕೊನೆಗೂ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಅವಕಾಶ ಸಿಕ್ಕಿತೆಂದು ಬಹಳ ಸಂತೋಷಪಟ್ಟರು. ತಮ್ಮ ಸ್ನೇಹಿತನೂ ಸರ್ಕಾರದಿಂದ ದೊರೆಯುತ್ತಿದ್ದ ಗೌರವ-ಮನ್ನಣೆ-ಆದರಗಳಿಗೆ ಪಾತ್ರನಾಗಿ ಬಡತನದಿಂದ ಹೊರಬರುವನೆಂದು ಖುಷಿಪಟ್ಟರು. ಹೀಗೆ ಅನೇಕ ವರ್ಷಗಳವರೆಗೂ ಇವರ ಸ್ನೇಹ ಭಾಂಧವ್ಯ ಮುಂದುವರೆಯಿತು. ಅನೇಕ ಅತ್ಯಮೂಲ್ಯ ಸಲಹೆ, ಅನುಭವ, ವಿಚಾರಗಳ ಮೂಲಕ ಮೈಸೂರು ರಾಜ್ಯದ, ಬೆಂಗಳೂರಿನ ಉನ್ನತಿಗೆ ಕಾರಣಕರ್ತರಾದರು. ಗೋಪಾಲ ಕೃಷ್ಣ ಗೋಖಲೆಯವರ ಅಭಿಮಾನಿಗಳಾಗಿದ್ದ ಗುಂಡಪ್ಪನವರು ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ನಿರ್ಮಿಸಿ ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದರು.
   
೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ್ದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೫ರ ಅಕ್ಟೋಬರ್ ೭ರಂದು (ಮೇಲೆ ಹೇಳಿದ ಘಟನೆ ನಡೆದ ೫೦ ವರ್ಷಗಳ ನಂತರ) ಡಿ ವಿ ಜಿ ನಿಧನರಾದರು. ಅವರಿಗೆ ಸಂಬಂಧಪಟ್ಟ ವಸ್ತುಗಳ ವಿಲೇವಾರಿ ನಡೆಯಬೇಕಾದರೆ ಒಂದು ಕಬ್ಬಿಣದ ಪಟ್ಟಿಗೆ ಸಿಕ್ಕಿತು. ಅದನ್ನು ತೆರೆದು ನೋಡಿದಾಗ, ಗುಂಡಪ್ಪನವರಿಗೆ, ಅವರು ನೀಡಿದ ಸೇವೆಗೆ, ಮೈಸೂರು ರಾಜ್ಯದ ಖಜಾಂಚಿಯವರ ಸಹಿ ಇದ್ದ, ಎಂದೆಂದೂ ಉಪಯೋಗಿಸಿರದ ೯೦೦, ೧೨೦೦, ೧೫೦೦ ರೂಪಾಯಿ ಮೊತ್ತದ ಹಲವಾರು ಚೆಕ್ಕುಗಳು ಸಿಕ್ಕವು. ಆಗಿನ ಕಾಲದಲ್ಲಿ ಅವುಗಳ ಬೆಲೆ ಲಕ್ಷಕ್ಕೂ ಹೆಚ್ಚು. ಎಂಥಹುದೇ ಕಷ್ಟ ಬಂದಾಗಲೂ ಒಂದೇ ಒಂದು ಚೆಕ್ಕನ್ನು ಉಪಯೋಗಿಸದೆ ತಮ್ಮ ಸ್ವಾಭಿಮಾನ ಮೆರೆದಿದ್ದರು.

ಸ್ನೇಹಿತನ ಮನಸ್ಸಿಗೆ ನೋವಾಗಬಾರದೆಂದು ಹಾಗು ತನ್ನ ಮನಸ್ಸಿಗೂ ಇರುಸುಮುರುಸಾಗಬಾರದೆಂದು ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿಕೊಂಡಿದ್ದ ಗುಂಡಪ್ಪನವರು ಅದರಿಂದ ಬಂದಿದ್ದ ಸಂಪತ್ತನ್ನು ಉಪಯೋಗಿಸದೆ, ಸ್ನೇಹವೇ ಸಂಪತ್ತು ಎಂದು ನಿರೂಪಿಸಿದ್ದರು. ಬಹಳಷ್ಟು ದೊಡ್ಡ ಮನುಷ್ಯರ ಕೆಲವೊಂದು ಉನ್ನತ ಗುಣಗಳನ್ನು ಅವರು ಮಾಡಿರುವ ಕೆಲಸಗಳಿಂದ ಅಳೆಯದೆ, ಅವರು ಮಾಡಿರದ ಕೆಲಸಗಳಿಂದ ಅಳೆಯಬಹುದಲ್ಲವೇ??

23 comments:

Unknown said...

ಸ್ನೇಹಕ್ಕೆ ಸಾವೇ ಇಲ್ಲ... ಡಿ.ವಿ.ಜಿ. ಹಾಗು ವಿಶ್ವೇಶ್ವರಯ್ಯನವರ ಸ್ನೇಹಕ್ಕೆ ನಮ್ಮ ನಮನ !! ಧನ್ಯೋಸ್ಮಿ ಗುರುರಾಜ ಬಾಸ್

ಗುರುರಾಜ said...

ಧನ್ಯವಾದಗಳು ಸುರೇಶ್ !!

Shrikrishna Bhat M said...

Thank you Guru for bringing this up and sharing with us... :)

ಗುರುರಾಜ said...

Thanks Srikrishna for visiting and leaving your comment.

Prashanth said...

ರಾಜು, ವಿಷಯ ಕುತೂಹಲ ಮೂಡಿಸಿತು. ಭಾಷೆ ವಿಶೇಷವಾಗಿದೆ.

ಹೀಗೆಯೇ ಬರೆಯುತ್ತಿರಿ.. :o)

ಗುರುರಾಜ said...

ಧನ್ಯವಾದಗಳು ಪ್ರಶಾಂತ್. ನಿಮ್ಮ ಪ್ರೋತ್ಸಾಹ ನನ್ನ ಮೇಲೆ ಸದಾ ಹೀಗೆಯೇ ಇರಲಿ.. :-)

gnani said...

Guru,

Super agi bardiddira and through your article i learnt about the friendship between the two bigwigs.Kudos to you!! Keep writing.....

ಗುರುರಾಜ said...

Thank you for your valuable comment.. Will try to write more frequently..

Vj said...

ತುಂಬಾ ಚೆನ್ನಾಗಿದೆ. ವಿಶ್ವೇಶ್ವರಯ್ಯನವರ ತಾಂತ್ರಿಕತೆಯ ಮೆರಗು, ಡಿ ವಿ ಜಿ ಯವರ ಕೃತಿಗಳ ಸೊಬಗು, ಇವೆರಡನ್ನೂ ಮೇಲಯಿಸಿರುವ ನಿಮ್ಮ ಬರವಣಿಗೆಯನ್ನು ಓದಿ ನಾನಾದೆ ಬೆರಗು.
;-)
ತಾಂತ್ರಿಕರಂಗದಲ್ಲಿ ಉದ್ಯೊಗ ಮಾಡಿಕೊಂಡು ಸಾಹಿತ್ಯ ಕ್ಷೆತ್ರದಲ್ಲಿ ಆಸಕ್ತಿ ಇಟ್ಟುಕೊಂಡಿರುವ ನಿಮ್ಮ ಈ ಲೇಖನ, ಅವರಿಬ್ಬರ ಸ್ನೇಹ ಸ್ವಾಭಿಮಾನ ದೇಶಪ್ರೇಮಗಳ ಸಮತೋಲನಗಳಿಗೆ ಸರಿಸಾಟಿಯಾದ ತೂಕ ಹೊಂದಿದೆ ಎಂದರೆ ಅತಿಶಯೋಕ್ತಿ ಆಗಲಾರದೆಂದು ಭಾವಿಸುತ್ತೇನೆ

ಗುರುರಾಜ said...

ಧನ್ಯವಾದಗಳು ವಿಜಯ್. ನಿಮ್ಮ ಪ್ರೋತ್ಸಾಹವೇ ಶ್ರೀರಕ್ಷೆ. ನಿಮ್ಮ ಪದಗಳ ನಡುವಿನ "ಆಟ" ಮುದ ನೀಡಿತು.

ಅರವಿಂದ ಕುಲಕರ್ಣಿ said...

sarala mattu sundara baravanige. Heege bareeta iri..

ಗುರುರಾಜ said...

Thanks arvind :)

Kathik V said...

Excellent Guru. Dhanyavada.

Farhana said...

Very nice article about friendship.. tumba channage bardedera:)

ಗುರುರಾಜ said...

Thank you very much Karthik

ಗುರುರಾಜ said...

Thanks Farhana.. Protsaahakke dhanyavaada

ಪ್ರಮೋದ್ said...

Sakatth Maatu..Super Baraha

ಗುರುರಾಜ said...

Thanks Pramod !!!

Phani said...

Katheyu thumba chennagidhe, Ullekhisida reethiyuu thumba chennagidhe !! DhanyavadagaLu Guru !

ಗುರುರಾಜ said...

thanks phani for the comments..

Yamuna said...

Thumba chennagi bardidira Guru,sneha yendre heegirabeku,odi kushi ayithu...heege barithiri :)

ಗುರುರಾಜ said...

Yamuna avare blog ge swagatha mathu nimma protsaahakke chiraruni..

Unknown said...

Very very nice Guru...
D.V.G is someone really really great and nothing to beat the "Mankuthimmana Kagga"..everybody should get their hands on one and read it.. I like the English transcreation of Kagga by Dr. (Mrs.) Myna R. Shetty and I recommend it to everyone who cannot comprehend Hale Kannada.

And of course needless to say about Sir.M.V.. He is someone who puts today's bureaucrats to shame..I've heard that he accepted a position only after making it very clear to his family that there would be no recommendation for someone only on the basis that he/she is related to him..hard to find such great people these days where nepotism runs into dynasties...

Idanella Kannadadalli bareyabahudu aadare nanage ashtu sahajavaagi bareyoke samaya siguttilla..so mind my english please...