Thursday, March 29, 2012

ಗಲಾಟೆ ಗದ್ದಲ

ಬಹು ಕಾಲದ ಗೆಳೆಯರಾದ ನಾನು, ಡಾ| ಪ್ರಶಾಂತ್, ಮತ್ತು ವಿವೇಕಾನಂದ, ಪ್ರತಿ ತಿಂಗಳ ಎರಡನೆ ಶನಿವಾರ ಭೇಟಿ ಆಗುವ ಕಾರ್ಯಕ್ರಮ ಈ ಬಾರಿ ಲಾಲ್ಬಾಗ್ ನಲ್ಲಿ ನಿಗದಿ ಆಗಿತ್ತು.. ಸಂಜೆ ಎಲ್ಲರೂ ೫ ಗಂಟೆಗೆ ಸೇರಿದೆವು. ಒಳಗೆ ಹೋಗುತ್ತಿದ್ದಂತೆ. ಪಾರಿವಾಳಗಳ ಚಿಲಿಪಿಲಿ ಸದ್ದು ಎಲ್ಲ ಕಡೆ ಕೇಳುತ್ತಿತ್ತು. ಅದನ್ನು ಗಮನಿಸಿದ ವಿವೇಕ್ ಹೇಳಿದರು ಬಹುಶಃ ಎಲ್ಲ ಪಾರಿವಾಳಗಳು ಮಾತಾಡಿಕೊಳ್ಳುತ್ತವೆ ಅನ್ಸುತ್ತೆ, ಬೆಳಿಗ್ಗೆಯಿಂದ ನೀನೆಲ್ಲಿ ಹೋಗಿದ್ದೆ, ನಾನೆಲ್ಲಿ ಹೋಗಿದ್ದೆ, ಏನೇನ್ ಮಾಡಿದೆ, ಯಾರ್ಯಾರ್ ಮೈ ಮೇಲೆ ಹಿಕ್ಕೆ ಹಾಕಿದೆ ಅಂತೆಲ್ಲ.. ಅದಕ್ಕೆ ಡಾ| ಪ್ರಶಾಂತ್ ಹೇಳಿದರು ಹ್ಞೂ ನಪ್ಪ.. ಪಕ್ಷಿಗಳು ನಮ್ಮ ಹಾಗೆ.. ನಮ್ ಥರನೇ ಎಲ್ಲ ವಿಷಯ ಮಾತಾಡ್ಕೋತಾ ಇರುತ್ವೆ.
 ಇನ್ನು ಹಕ್ಕಿಗಳ ಚಿಲಿಪಿಲಿ ಎಷ್ಟೋ ವಾಸಿ, ಕೇಳಕ್ಕೆ ಸುಮಧುರವಾಗಿರುತ್ತೆ. ಆದ್ರೆ ಎಲ್ಲಾದರು ತುಂಬಾ ಜನ ಸೇರಿದರೆ ಕೇಳೋಕೆ ಆಗೋಲ್ಲ.. ಉದಾಹರಣೆಗೆ ಈ ಲಾಲ್ಬಾಗ್ ನೆ ತಗೋಳಿ.. ಇಷ್ಟು ಜನ ಮಾತಾಡ್ತಾ ಇದಾರೆ.. ಇಷ್ಟೊಂದು ಗಲಾಟೆ ಇದೆ.. ಕೇಳೋಕೆ ಎಷ್ಟು ಹಿಂಸೆ. ಯಾರು ಏನು ಮಾತಾಡ್ತಾ ಇದಾರೆ ಅಂತ ಗೊತ್ತು ಕೂಡ ಆಗಲ್ಲ.. ಆದ್ರೆ ಗದ್ದಲ ಮಾತ್ರ ಇದ್ದೆ ಇರುತ್ತೆ. ಸಾಮಾನ್ಯವಾಗಿ ಸರ್ಕಾರೀ ಬಸ್ಸಿನಲ್ಲಿ ಓಡಾಡುವ ಡಾ| ಪ್ರಶಾಂತ್ (ಈ ಬಗ್ಗೆ ನನಗೆ ಸದಾ ಹೆಮ್ಮೆ ಇದೆ) ಇಂತಹ ಬಹಳ ಅನುಭವ ಹೇಳತೊಡಗಿದರು..ಹೆಚ್ಚಾಗಿ ಸ್ಕೂಲ್ ಬಿಡುವ ಟೈಂ ನಲ್ಲಿ ಬಸ್ಸಿನ್ನಲ್ಲಿ ಸದಾ ಗಲಾಟೆ ಇರುತ್ತದೆ.. ಎಲ್ಲರೂ ಜೋರು ಜೋರಾಗಿ ಏನಾದರೂ ಮಾತಾಡ್ತಾ ಇರ್ತಾರೆ. . ಪ್ರಶಾಂತ್ ಕಷ್ಟ ಪಟ್ಟು ಅವ್ರು ಏನು ಮಾತಾಡ್ತಾ ಇದಾರೆ ಅಂತ ಗಮನಿಸೋಕೆ ಪ್ರಯತ್ನಿಸಿದರೂ ಪಕ್ಕದಲ್ಲಿದ್ದ ಇಬ್ಬರು ಮಕ್ಕಳ ಹೊರತಾಗಿ ಇನ್ನ್ಯಾರ ಮಾತುಗಳು ಸ್ಪಷ್ಟವಾಗಿ ಕೇಳುತ್ತಿರಲಿಲ್ಲವಂತೆ .. ಬರಿ ಗುಜು ಗುಜು ಅಂತ ಸದ್ದು ಮಾತ್ರ ಕೇಳುತ್ತಿತ್ತಂತೆ.

ಸುಮಾರು ಇದೇ ತರಹದ ಅನುಭವ ನನಗೂ ಇತ್ತೀಚಿಗೆ ಆಯಿತು.. ಆಫೀಸ್ ನಲ್ಲಿ ಫೈರ್ ಡ್ರಿಲ್ ನಡೆಯುತ್ತಿತ್ತು. ಇಡೀ ಆಫೀಸ್ ನ ಸಿಬ್ಬಂದಿ ಎಲ್ಲ ಒಟ್ಟಿಗೆ ಕಲೆತಿದ್ದರು. ಆಗ ಶುರು ಆಯಿತು ನೋಡಿ ಗದ್ದಲ. ನನಗೆ ಪ್ರಶಾಂತ್ ಜೊತೆಗಿನ ಸಂಭಾಷಣೆ ನೆನಪಾಯಿತು. ಕೇಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಪ್ರಶಾಂತ್ ಹೇಳಿದ್ದು ಅಕ್ಷರಶಃ ನಿಜ ಎನ್ನಿಸಿತು.. ಒಂದೇ ಒಂದು ಸಂಭಾಷಣೆ ಕೂಡ ನನ್ನಿಂದ ಸರಿಯಾಗಿ ಅರ್ಥೈಸಿಕೊಳ್ಳಲು ಆಗಲಿಲ್ಲ. ಬರಿ ಗೌಜು ಗದ್ದಲ ಬಿಟ್ಟರೆ ಬೇರೆ ಏನೂ ತಿಳಿಯುತ್ತಿರಲಿಲ್ಲ. ಎಲ್ಲರೂ ಅವರವರ ಲೋಕದಲ್ಲಿ, ಸಮಸ್ಯೆ ತೋಡಿಕೊಳ್ಳುವುದರಲ್ಲಿ ತಲ್ಲೀನರಾಗಿ ಹೋಗಿದ್ದರು. ಫೈರ್ ಡ್ರಿಲ್ ಮುಗಿಯಿತೆಂಬ ಘೋಷಣೆ ಕೂಡ ಕೇಳಿಸುತ್ತಿರಲಿಲ್ಲ.. ಏನೋ ಘೋಷಣೆ ಆಗುತ್ತಿದೆ ಎಂದು ಯಾರೋ ಕಿರುಚಿದಾಗ, ಎಲ್ಲರೂ ನಿಶಬ್ದವಾಗಿ ನಿಂತರು.. ಫೈರ್ ಡ್ರಿಲ್ ಮುಗಿಯಿತೆಂದು ಗೊತ್ತಾದ ತಕ್ಷಣ ಎಲ್ಲರೂ ತಮ್ಮ ತಮ್ಮ ಡೆಸ್ಕ್ ಗಳ ಕಡೆ ನಡೆಯತೊಡಗಿದರು.. ಮತ್ತದೇ ಗೌಜು ಗದ್ದಲಗಳೊಂದಿಗೆ..
ಆಗ ಅನಿಸಿತು.. ಇಡೀ ಭೂಮಂಡಲದ ಸದ್ದು, ಗಲಾಟೆ, ಗೌಜುಗಳ ನಡುವೆ ಪ್ರಕೃತಿ ಮಾತೆಯ ಕಿವಿಗಳು ತೂತು ಬಿದ್ದಿರಬಹುದಲ್ಲವೇ.. ??

6 comments:

Prashanth said...

ರಾಜು, ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ನಲ್ಲಿ ಹೊಸದೊಂದು ಲೇಖನ ಓದಿ ಖುಷಿಯಾಯಿತು. ಹಿಂದಿನ ನಮ್ಮ ಭೇಟಿಯ ಸಂಭಾಷಣೆಯಿಂದ ಪ್ರಾರಂಭಿಸಿ, ಕೊನೆಗೆ ನಿಮ್ಮ ಅನುಭವ-ಅನಿಸಿಕೆ ಹಂಚಿಕೊಂಡಿರುವ ಪರಿ ಚಂದವಾಗಿದೆ. 'ಹೀಗೆಯೇ ಬರೆಯುತ್ತಿರಿ' ಎಂದು ಮತ್ತೊಮ್ಮೆ ಹೇಳಬಯಸುತ್ತೇನೆ :o)

ಗುರುರಾಜ said...

ಧನ್ಯವಾದಗಳು ಪ್ರಶಾಂತ್.. ನೀವೇ ಸ್ಫೂರ್ತಿ.. :)

Anonymous said...

ತುಂಬ ಚೆನ್ನಾಗಿ ಬರದಿದ್ದಿರ. ನನಗೆ ಈ ಲೇಖನ ಓದಿದ್ದಾಗ ಬರಿ ಒಂದು ಹಾಡಿನ ಸಾಲ ನೆನಪಾಗ್ತಾ ಇದೆ
"ಹಾರೋ ಹಕ್ಕಿನ ತಂದು ಗೂಡಿಗೆ ಹಾಕೋದು , ನರ ಮನುಷ್ಯ ಕಲಿಯಲ್ಲ , ಒಳ್ಳೇದು ಉಳಿಸಲ್ಲ. ಅವನು ನಡಿಯುವ ದಾರಿಲಿ ಗರಿಕೆ ನು ಬೆಳಿಯಲ್ಲ"

ಗುರುರಾಜ said...

ಒಳ್ಳೆ ಉದಾಹರಣೆ ಮಾಯಾ.. :-) ನನ್ನ ಬರಹಕ್ಕೆ ಅತ್ಯುತ್ತಮ ಹಿನ್ನುಡಿ..

Unknown said...

really so nice sir.....

ಗುರುರಾಜ said...

Thanks Vishaakha avre.. Welcome to blog..