Friday, September 2, 2011

ಕನ್ನಡ ಗಂಗೆಯಲಿ ಮೀಯುವೆ ನಾನೀಗ..

ನಮಸ್ಕಾರ ಗೆಳೆಯರೇ..
ಗಣೇಶ ನೀರಲ್ಲಿ ಮುಳುಗಿ, ಜನವರಿಯಲ್ಲಿ ಅಣ್ಣಮ್ಮ ಬರೋದ್ರೊಳಗೆ ನವೆಂಬರ್ ಮಧ್ಯೆ ಬರ್ತಾ ಇದೆ.. ಕನ್ನಡಮ್ಮನ ಸೇವೆ ಮಾಡಲು ಎಷ್ಟೆಷ್ಟೋ ತರಹದ ಪ್ರಯತ್ನ ಮಾಡುವವರಿದ್ದಾರೆ. ಕೆಲವರದು ಪ್ರಾಮಾಣಿಕ ಪ್ರಯತ್ನವಾದರೆ, ಕೆಲವರದು ಬರಿ ತೋರಿಕೆಯ ಕನ್ನಡ ಪ್ರೇಮ.. ಇಂಥಹವರ ಮಧ್ಯೆ ನನ್ನ ಸ್ನೇಹಿತರಾದ ಡಾ| ಪ್ರಶಾಂತ್ ವಿಭಿನ್ನ ರೀತಿಯ ಕನ್ನಡ ಸೇವೆ ಮಾಡಲು ತಯಾರಾಗುತ್ತಿದ್ದಾರೆ. ಕಹಳೆ ಎಂಬ ಕನ್ನಡ ಅಂತರ್ಜಾಲ ತಾಣವೊಂದನ್ನು ತಯಾರಿಸಿದ್ದಾರೆ.
ಬಹಳ ದಿನಗಳಿಂದ ನಾವಿಬ್ಬರೂ ಇದರ ಬಗ್ಗೆ ಚರ್ಚೆ ನಡೆಸಿ, ಈಗ ಅದನ್ನು ಕಾರ್ಯರೂಪಕ್ಕೆ ತರಲು ಅಣಿಯಾಗಿದ್ದೇವೆ. ಕನ್ನಡದ ಬಗ್ಗೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಅಂತರ್ಜಾಲ ತಾಣಗಳಿವೆ ಮತ್ತು ಗೂಗಲ್ ಕೂಡಾ ಕೆಲವೊಮ್ಮೆ ಕನ್ನಡದ ಬಗ್ಗೆ ಏನಾದರೂ ಹುಡುಕಾಟ ನಡೆಸಿದರೆ ಉತ್ತರ ನೀಡದೆ ಬೆಪ್ಪನಾಗುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡಕ್ಕೆ ಏನಾದರೂ ನೀಡಬೇಕು.. ಅಂತರ್ಜಾಲದಲ್ಲಿ ಕನ್ನಡದ ಕೊರತೆ ನೀಗಿಸಬೇಕು ಎಂಬುದು ನಮ್ಮ ಪುಟ್ಟ ಪ್ರಯತ್ನ.

ಪ್ರತಿ ವರ್ಷದ ನವೆಂಬರ್ ತಿಂಗಳಲ್ಲಿ ಪ್ರತಿ ದಿನ ಒಂದೊಂದು ಲೇಖಕರಿಂದ ನಾಡು ನುಡಿ ಸಂಸ್ಕೃತಿ ಕುರಿತಾದ ಬರವಣಿಗೆಯನ್ನೂ ಕಹಳೆ ಯಲ್ಲಿ ಮುದ್ರಿಸಲಾಗುವುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ತುಂಬಾ ಆಗತ್ಯ. ನೀವು ಲೇಖನಗಳನ್ನು ಬರೆಯಬೇಕು ಎಂದೇನಿಲ್ಲ. ಅಲ್ಲಿ ಬಿತ್ತರಿಸಲಾಗುವ ಲೇಖನಗಳಿಗೆ ನಿಮ್ಮ ಕಾಮೆಂಟ್ಸ್ಗಳಿಂದ ಪ್ರೋತ್ಸಾಹ ನೀಡಿದರೆ, ಲೇಖಕನಿಗೆ ಅಂತಹ ಹತ್ತು ಹಲವಾರು ಲೇಖನ ಬರೆಯುವ ಹುಮ್ಮಸ್ಸು, ಉತ್ಸಾಹ ಬರುತ್ತದೆ.. ಇದನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ, ಅವರಲ್ಲಿ ಯಾರಿಗಾದರೂ ಇದರ ಬಗ್ಗೆ ಆಸಕ್ತಿ ಇದ್ದು ಅವರು ಕಹಳೆಗೆ ತಮ್ಮ ಕೊದುಗೆಯನ್ನು ನೀಡಿದರೆ ಅದೂ ಸಹ ಕನ್ನಡಕ್ಕೆ ನೀವು ಮಾಡುವ ಸೇವೆ.
ಗಣೇಶ ಹಬ್ಬದ ಶುಭದಿನದಂದು, ವಿಘ್ನನಿವಾರಕನ ಆಶೀರ್ವಾದಗಳೊಂದಿಗೆ ಹಾಗೂ ನಿಮ್ಮೆಲ್ಲರ ಪ್ರೀತಿಪೂರ್ವಕ ಮತ್ತು ಉತ್ಸಾಹದಾಯಕ ಪ್ರೋತ್ಸಾಹದ ನಿರೀಕ್ಷೆಯೊಂದಿಗೆ ಕಹಳೆಯನ್ನು ಕನ್ನಡಿಗರಿಗೆ ಸಮರ್ಪಿಸಿದ್ದೇವೆ; ನಾವೆಲ್ಲರೂ ಇದನ್ನು ಉಳಿಸಿ ಬೆಳೆಸೋಣ.
ಕಹಳೆಗೆ ಇಂದೇ ಭೇಟಿ ಕೊಡಿ ಮತ್ತು ಅಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಏನಾದರೂ ಕೊಡುಗೆ ನೀಡಿ ಎಂದು ನನ್ನ ಸವಿನಯ ಪ್ರಾರ್ಥನೆ.

7 comments:

Prashanth said...

ರಾಜು, ನಿಮ್ಮ Blogನ ನೂತನ ವಿನ್ಯಾಸ ಅಚ್ಚುಕಟ್ಟಾಗಿ, ಮನಮೋಹಕವಾಗಿ ಕಾಣುತ್ತಿದೆ. ಉತ್ತಮ ಅಭಿರುಚಿ!

Aravinda said...

ಇದನ್ನು ನೋಡಿದ್ದೀರಾ? http://arivu.sanchaya.net

Prashanth said...

ಅರವಿಂದ ಅವರೇ, ಅರಿವಿನ ಅಲೆಗಳು ಸಹ ಕಳಹೆಗೆ ಸ್ಪೂರ್ತಿ. ಇದನ್ನು ನಾವು ಕಹಳೆಯ ಬಗ್ಗೆ (http://www.kahale.gen.in/p/blog-page_22.html) ಪುಟದಲ್ಲಿ ತಿಳಿಸಿದ್ದೇವೆ :o)

Aravinda said...

ಓಹ್ ಸರಿ, ನೋಡಿರಲಿಲ್ಲ... ಧನ್ಯವಾದಗಳು.
ನಿಮ್ಮ ಯೋಜನೆಗೆ ಶುಭಾಶಯಗಳು.

ಗುರುರಾಜ said...

ಅರವಿಂದ.. ಮೊದಲಿಗೆ ನನ್ನ ಬ್ಲಾಗ್ ಗೆ ಸ್ವಾಗತ. :)
ಡಾ ಪ್ರಶಾಂತ್ ಹೇಳಿದಂತೆ ಈ ತರಹದ ಕನ್ನಡ ಬ್ಲಾಗ್ ಗಳೇ ನಮಗೆ ಸ್ಪೂರ್ತಿ. ಹೀಗೆ ಭೇಟಿ ನೀಡುತ್ತಿರಿ ಮತ್ತು ನಿಮ್ಮ ಅನಿಸಿಕೆಗಳನ್ನೂ ತಿಳಿಸಿ.

ಕಹಳೆಗೆ ನಿಮ್ಮ ತುಂಬು ಹೃದಯದ ಬೆಂಬಲವಿರಲಿ..

prabhamani nagaraja said...

ನಿಮ್ಮ ಪ್ರಯತ್ನ ಸ್ವಾಗತಾರ್ಹವಾಗಿದೆ. `ಕಹಳೆ'ಯ ಮೊಳಗುವಿಕೆ ಎಲ್ಲೆಲ್ಲೂ ಪ್ರತಿಧ್ವನಿಸಲಿ.ಅಭಿನ೦ದನೆಗಳು.

ಗುರುರಾಜ said...

ಧನ್ಯವಾದಗಳು ಪ್ರಭಾಮಣಿಯವರೇ. ನನ್ನ ಬ್ಲಾಗ್ ಗೆ ಸ್ವಾಗತ.