Monday, January 3, 2011

ಪುಟ್ಟನ ಪ್ರಯಾಣ !!!

ತನ್ನ ಬಾಸ್ ನ ಎದುರು ನಿಂತಿದ್ದ ಪುಟ್ಟ ಸಣ್ಣಗೆ ನಡುಗುತಿದ್ದ.. ಮಾಡಿರುವ ಕೆಲಸದಲ್ಲಿ ಒಂದು ತಪ್ಪಾಗಿದೆ.. ತಪ್ಪು ಸಣ್ಣದಿದ್ದರೂ, ಬಾಸ್ ಕಣ್ಣಿಗೆ ಅದು ದೊಡ್ಡದಾಗಿ ಕಾಣುವ ಎಲ್ಲ ಸೂಚನೆಗಳು ಬಾಸ್ ನ ನಡವಳಿಕೆಯಲ್ಲಿ ಗೊತ್ತಾಗುತ್ತಿದೆ..

"ಯಾಕೆ ಹಿಂಗಾಯ್ತು?? ಹೇಳಿದ್ದನ್ನು ಮಾಡೋಕೆ ಏನ್ ಪ್ರಾಬ್ಲಮ್?? " ಬಾಸ್ ವಾಚಾಮಗೋಚರವಾಗಿ ಸಹಸ್ರ ನಾಮ ಶುರುಮಾಡುವ ಮುಂಚೆಯೇ.. ಪುಟ್ಟ ಕೇಳಿದ... "ಸರ್ ಒಂದು ವಿಷ್ಯ"
"ಏನು"? ತಲೆ ಮೇಲೆತ್ತದೆ ಕೇಳಿದ ಬಾಸ್ ಗೆ ಅಳುಕಿನಿಂದ ಪುಟ್ಟನ ಉತ್ತರ.. "ರಜೆ ಬೇಕಿತ್ತು.. "
"ಒಹ್ ಯಾಕ್ರಿ?? "
"ಸರ್ ಒಂದು ಮದ್ವೆ ಇತ್ತು.. ಅತ್ತೆ ಮಗಳ ಮದುವೆ ಊರಲ್ಲಿ.. ಹೋಗಬೇಕಿತ್ತು.. "
"ಯಾವಾಗ??" "ನಾಳೆ"
"ಈಗ ಹೇಳಿದ್ರೆ ಹೆಂಗ್ರಿ??? " "ಸರ್ ಎರಡೇ ದಿನ"
"ಓಕೆ ಹೋಗ್ಬನ್ನಿ.. ಸಂಜೆ ಒಳಗೆ ಅ ಫೈಲ್ ನ ಮುಗಿಸಿ ನಂಗೆ ಕಳ್ಸಿ ಹೋಗಿ"
"ಸರಿ ಸರ್"
ಖುಷಿಯಿಂದ ಪುಟ್ಟ ಹೊರಗೆ ಬಂದು ಮನೆಗೆ ಕಾಲ್ ಮಾಡಿದ.. "ಅಮ್ಮ... ಆಫೀಸ್ ಕೆಲಸದ ಮೇಲೆ ಚೆನ್ನೈಗೆ ಹೋಗಬೇಕು"ಬರೋದು ೨ ದಿನ ಆಗುತ್ತೆ".. ಅವನ ಧ್ವನಿ ಯಲ್ಲಿದ್ದ ನಡುಕ ಅವನಿಗೆ ಮಾತ್ರ ತಿಳಿಯುತ್ತಿತ್ತು..
ಸಂಜೆ ಖುಷಿಯಿಂದ ಮನೆಗೆ ಹೋಗಿ.. ರಾತ್ರಿಯೆಲ್ಲ ಸರಿಯಾಗಿ ನಿದ್ದೆ ಬರುತಿಲ್ಲ... ಏನೋ ಒಂದು ತಳಮಳ.. ತನ್ನ ಬಹು ದಿನದ ಕನಸು, ಆಸೆ ಪೂರೈಸಿಕೊಳ್ಳಲು ಕೇವಲ ೧ ದಿನ ಮಾತ್ರ ಇದೆ.. ತನ್ನ ೬ ತಿಂಗಳ ತಾಳ್ಮೆಗೆ ಕುತೂಹಲಕ್ಕೆ ತೆರೆ ಬೀಳಲಿದೆ..

ಮರು ದಿನ ಆಫೀಸಿನಿಂದ ಬೇಗ ಹೊರಟ ಪುಟ್ಟ.. ಮನೆಗೆ ಹೋಗಿ ಬ್ಯಾಗ್ ತೆಗೆದುಕೊಂಡು ಹೊರಟ..
ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ನೇತು ಹಾಕಿದ್ದ ದೊಡ್ಡ ಬೋರ್ಡ್ ಹುಡುಕತೊಡಗಿದ.. .. ತಾನು ಹುಡುಕುತ್ತಿದ್ದ ಬಸ್ ಪ್ಲಾಟ್ಫಾರ್ಮ್ ನಂ. ೫ ರಲ್ಲಿ ಇರುತ್ತೆ ಎಂದು ಬರೆದಿತ್ತು.. ಓಡಿ ಹೋಗಿ ನೋಡಿದ.. ಒಂದು ಬಸ್ ನಿಂತಿತ್ತು. ಸುಮಾರಾಗಿ ಜನ ತುಂಬಿದ್ದರು..
ಟಿಕೆಟ್ ತೆಗೆದುಕೊಂಡು ಹೋಗಿ ಒಳಗೆ ವಿಂಡೋ ಸೀಟ್ ಹುಡುಕಿ ಕುಳಿತುಕೊಂಡ.. ಲೈಟ್ ಆಫ ಅದೊಡನೆ.. ಯೋಚನಾ ಲಹರಿ ಹರಿಯತೊಡಗಿತು ಅವನ ಮನದಲ್ಲಿ..


ಬೆಳಿಗ್ಗೆ ೮ ಕ್ಕೆ ತಾನು ಇಳಿಯುವ ಸ್ಟಾಪ್ ಬಂತು.. ಬಸ್ ಸ್ಟ್ಯಾಂಡ್ ಪಕ್ಕದಲ್ಲೇ ಒಂದು ಸುಮಾರಗಿರುವ ಲಾಡ್ಜ್ ನಲ್ಲಿ ರೂಂ ಮಾಡಿದ.. ಸ್ನಾನ ತಿಂಡಿ ಮುಗಿಸಿ ಹೊರಗೆ ಹೋಗಿ ವಿಚಾರಿಸಿದ ಇಲ್ಲಿ ಲೈಬ್ರರಿ ಎಲ್ಲಿದೆ... ಎಷ್ಟು ದೂರ ಆಗುತ್ತೆ..? ಅದು ಲಾಡ್ಜ್ ನಿಂದ ೫ ನಿಮಿಷ ನಡೆದರೆ ಸಿಗುತ್ತೆ ಎಂದ ಮೇಲೆ ನಿರಾಳವಾಗಿ ಮತ್ತೆ ಲಾಡ್ಜ್ ಗೆ ಬಂದ.. ಅವನ ಕೆಲಸ ಇದ್ದದ್ದು ಸಂಜೆ ಮೇಲೆ.. ಮಂಚದ ಮೇಲೆ ಮಲಗಿ ಯೋಚಿಸತೊಡಗಿದ ಏನು ಮಾಡುವುದೆಂದು.... ಟಿವಿ ಬೇರೆ ಇರಲಿಲ್ಲ.. ಮೊಬೈಲಿನಲ್ಲಿ ಇಂಟರ್ನೆಟ್ ಕನೆಕ್ಟ್ ಬೇರೆ ಆಗ್ತಾ ಇರ್ಲಿಲ್ಲ. ಸುಮ್ನೆ ಗೋಡೆ ನೋಡುತ್ತಾ ಮಲಗಿದ್ದ.. ಗೋಡೆ ಮೇಲೆ ಒಂದು ಸುಂದರ ಕ್ಯಾಲೆಂಡರ್ ನೇತು ಹಾಕಲಾಗಿತ್ತು... ರವಿವರ್ಮನ ಪೇಂಟಿಂಗ್ ನೊಂದಿಗೆ.. ಆಗ ಒಂದು ಯೋಚನೆ ಬಂತು..

ಇಂಟರ್ನೆಟ್ ನಲ್ಲಿ ಚಾಟ್ ಮಾಡುವಾಗ ತಾನೀಗ ನೋಡಲು ಬಂದಿದ್ದ ಪ್ರೀತಿಯ ಗೆಳತಿ ಪುಟ್ಟಿ ಎಂದೋ ಹೇಳಿದ್ದಳು, ಅವಳ ಕಾಲೇಜ್ ನಲ್ಲಿ ದಿವ್ಯ ರೇಗಿಸಿ ಇವಳಿಗೆ ಕಾಟ ಕೊಟ್ಟಿದ್ದ ಕಥೆ.

ಇಷ್ಟು ದಿನ ಫೋಟೋ ಕಳಿಸದೆ, ಫೋನ್ ನಂಬರ್ ಕೊಡದೆ ಬರಿ ಚಾಟ್ ಮತ್ತು ಇಮೇಲ್ ನಲ್ಲೆ ಆಟ ಆಡಿಸುತ್ತಿದ್ದ ಪುಟ್ಟಿ ಗೆ, ಅವಳ ಜೊತೆ ಚಾಟ್ ಮಾಡಲೆಂದೇ ರಿಜಿಸ್ಟರ್ ಮಾಡಿದ್ದ ಇಮೇಲ್ ನಿಂದ ಪುಟ್ಟಿಗೆ ಮೇಲ್ ಮಾಡಿದ.. . "ನಾನು ಪುಟ್ಟ ಅಲ್ಲ.. ದಿವ್ಯ !!! ಇಷ್ಟು ದಿನ ಮಾಡಿದ್ದು ಪ್ರಾಕ್ಟಿಕಲ್ ಜೋಕ್ !! "

ಗೋಡೆ ಮೇಲೆ ನೇತು ಹಾಕಿದ್ದ ಕ್ಯಾಲೆಂಡರ್ ನಗುತ್ತಿತ್ತು.... ಏಪ್ರಿಲ್ ೧ ಎಂಬ ದಿನಾಂಕದೊಡನೆ..

4 comments:

Chethan said...

yava hurige hogidre meet madoke?

Prashanth said...

ಕಥೆಯ ಹಿಂದಿನ ಭಾಗವನ್ನು ಓದಿದಾಗ ಪುಟ್ಟನ ಮೇಲಿದ್ದ ಅಸಮಾಧಾನ ಭಾವವು ಈ ಭಾಗವನ್ನು ಓದಿದಾಗ ಮಾಯವಾಯಿತು. ಈ ಸಂಚಿಕೆಯ ಬಗ್ಗೆ ಅನಿಸಿಕೆ ಬರೆಯುವ ಬದಲು, ಮುಂದಿನ ಸಂಚಿಕೆಯ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ.

ಪುಟ್ಟ-ಪುಟ್ಟಿಯರ ಕಥೆಯೊಂದಿಗೆ ಅಂತರ್ಜಾಲದಲ್ಲಿ ಹದಿಹರೆಯದವರ ಜೀವನದ ವಾಸ್ತವದ ಚಿತ್ರಣವನ್ನು ತೆರೆದಿಡುತ್ತಿರುವ ಬರಹಗಾರರ ಕೌಶಲ್ಯ ಮೆಚ್ಚುವಂಥದ್ದು. ನಿಮ್ಮೊಳಗಿನ ಸುಪ್ತ ಬರಹಗಾರನನ್ನು ಬೆಳಕಿಗೆ ತರುತ್ತಿರುವ ಈ Blog ನಲ್ಲಿ ಹೆಚ್ಚು ಹೆಚ್ಚು ಓದುವ ಬಯಕೆ. ಉತ್ತಮ ಬರವಣಿಗೆ ರಾಜು, ಹೀಗೆಯೇ ಬರೆಯುತ್ತಿರಿ :o)

ಗುರುರಾಜ said...

nimma commentgalige dhanyavaada prashanth.. nanna barahagaligintha nimma commentse jasthi manaranjane needuthide.. :-)
mundina sanchikegalalli putta puttiyara kathe munduvariyudu samshaya.. :-)
Hosathenadaru bareyalu yatnisuthene..

ಗುರುರಾಜ said...

@ chethan.. ooru gothilla putta yelladru sikkidre keltini. :)